`ಮಾಮು ಟೀ ಅಂಗಡಿ` ಹೊಸ ವಾಹನ ಹಳೆ ವಿನ್ಯಾಸ
Posted date: 29 Sun, Sep 2013 � 05:01:23 PM

ಹೊಸತನದಲ್ಲಿ ತುಂಬಿಕೊಂಡಿರುವ ‘ಮಾಮು ಟೀ ಅಂಗಡಿ’ ಕನ್ನಡ ಚಿತ್ರವೂ ಇದೀಗ ಮತ್ತೊಂದು ಸೊಬಗನ್ನು ಆಕರ್ಷಿಸಿದೆ. ನಾಲ್ಕು ಹೊಸ ವಾಹನಗಳಿಗೆ ಹಳೆ ಕಾಲದ ವಿನ್ಯಾಸ ಮಾಡಿ ಚಿತ್ರದಲ್ಲಿ ವಿಚಿತ್ರವಾಗಿ ಕಾಣುವಂತೆ ಮಾಡಲಾಗಿದೆ. ಇದೆ ಅಲ್ಲದ ಖಳ ನಾಯಕನ ವಾಹನ ಸಹ ಬೆಳಕಿನ ಜಾಗದಲ್ಲಿ ಬುರುಡೆ ಆಕೃತಿ, ಎರಡು ಕಟ್ಟಿ, ಪಕ್ಕದಲ್ಲೇ ಫ್ಯಾನ್ ಹಾಗೂ ಇನ್ನಿತರ ಉಪಕರಣಗಳನ್ನು ಜೋಡಿಸಲಾಗಿದೆ. ಈಗಾಗಲೇ ಈ ವಾಹನಗಳ ವಿನ್ಯಾಸವನ್ನು ಕಂಡು ಬೆರಗದವರು ಇದ್ದಾರೆ.

ಹಲವು ವಿಶೇಷ ವ್ಯಕ್ತಿಗಳ ಜೊತೆಗೆ ಮೊದಲ ನಿರ್ದೇಶನದಲ್ಲಿ ಪರಮೇಶ್ವರ್ ಅವರು ಸದ್ದಿಲ್ಲದೇ ಚಿತ್ರೀಕರಣವನ್ನುಮಾಡುತ್ತಾ ಬಂದಿದ್ದಾರೆ. ಮೊದಲ ಹಂತದಲ್ಲಿ ಅವರು ಬೆಂಗಳೂರಿನ ಸುತ್ತ ಮುತ್ತ ಚಿತ್ರೀಕರಣ ಮಾಡಿದ್ದಾರೆ. ಕನ್ನಡ ಸಿನೆಮಾದ ಜನಪ್ರಿಯ ನಾಯಕರುಗಳಾದ ಶ್ರೀನಗರ ಕಿಟ್ಟಿ, ಅಜಯ್ ರಾವು, ನೆನಪಿರಲಿ ಪ್ರೇಮ್ ಹಾಗೂ ಯೋಗೀಶ್ ಅವರು ಧ್ವನಿಗೂಡಿಸಲಿದ್ದಾರೆ. ಅಷ್ಟೇ ಅಲ್ಲದೆ ಶ್ರೀನಗರ ಕಿಟ್ಟಿ, ಅಜಯ್ ರಾವು, ನೆನಪಿರಲಿ ಪ್ರೇಮ್ ಹಾಗೂ ಪ್ರಜ್ವಲ್ ದೇವರಾಜ್ ‘ಮಾಮು ಟೀ ಅಂಗಡಿ’ ಚಿತ್ರದಲ್ಲಿ ಗೌರವ ಪಾತ್ರದಲ್ಲಿ ಅಭಿನಯಿಸಲಿದ್ದಾರೆ.

ಡಾನ್ಸ್ ಇಂಡಿಯ ಡಾನ್ಸ್, ಕಲರ್ಸ್ ಟಿ ವಿ ಅಲ್ಲಿ ಬರುತ್ತಿರುವ ‘ಜಲಕ್ ದಿಕ್ ಲಾಜ’ ಮತ್ತು ಚೈನಾ ದೇಶದ ಡಾನ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ವರುಣ್ ಸಿಂಗಮ್ ಈ ಚಿತ್ರದಲ್ಲಿ ಕಾಣಿಸಕೊಳ್ಳಲಿದ್ದಾರೆ. ಡಾನ್ಸ್ ಇಂಡಿಯ ಡಾನ್ಸ್ ಕಾಯಕ್ರಮದ ಟೆರೆನ್ಸ್ ಲೂಯಿಸ್ ‘ಮಾಮು ಟೀ ಅಂಗಡಿ’ ಚಿತ್ರದಲ್ಲಿ ಶಿಷ್ಯ ವರುಣ್ ಮೇಲಿನ ಮಮಕಾರಕ್ಕಾಗಿ ಒಂದು ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.


ಶ್ರೀ ರಾಮ್ ಸನ್ನುರ್ಕರ್ ಈ ಚಿತ್ರದ ನಿರ್ಮಾಪಕರು. ವ್ಯವಸಾಯ ಹಾಗೂ ರಾಜಕೀಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವರು.

ನಿರ್ದೇಶಕ ಎ ಪರಮೇಶ್ವರ್ ಅವರು ಈಗಾಗಲೇ ಹಲವು ವರ್ಷಗಳ ಕಾಲ ದೃಶ್ಯ ಮಾಧ್ಯಮದಲ್ಲಿ ಜಾಹೀರಾತುಗಳ ನಿರ್ದೇಶನದ ಅನುಭವ ಇರುವವರು. ಜೀ ಟಿ ವಿ ಗಾಗಿ, ಕನ್ನಡದ ಹೆಸರಾಂತ ನಿರ್ದೇಶಕರುಗಳಾದ ಶಷಾಂಕ್, ಗಿರಿರಾಜ, ಉಮೇಶ್, ವಿಶಾಲ್ ರಾಜ್, ಭಾಗ್ವನ್ ಅವರ್ ಬಳಿ ಸಹಾಯಕರದವರು. ಯು ಟ್ಯೂಬು ಗಾಗಿ ಅನೇಕ ನಟರುಗಳ ಲೈಫ್ ಸ್ಟೈಲ್ ವೀಡಿಯೋ ಅನ್ನು ನಿರ್ದೇಶನ ಮಾಡಿದ ಅನುಭವ ಹೊಂದಿದ್ದಾರೆ.

ಈ ಚಿತ್ರದಲ್ಲಿ ನಾಲ್ಕು ನಾಯಕರು ಹಾಗೂ ಮೂರು ನಾಯಕಿಯರ ಒಳಗೊಂಡ ಕಥೆ ಇದೆ. ಟಿ ಅಂಗಡಿ ಬಳಿ ಗೆಳೆಯರು ಸೇರುವುದು, ಮಾಮು ಜೊತೆ ಹರಟೆ, ಜಗಳ, ತಮಾಷೆ ಅಲ್ಲದೆ ಮನಮಿಡಿಯುವ ದೃಶ್ಯಗಳಿವೆ, ನಾಲ್ಕು ಸ್ನೇಹಿತರು ಪ್ರೀತಿಯಲ್ಲಿ ಆಸಕ್ತಿ ತೋರುವುದು, ಆನಂತರ ಭಿನ್ನಬಿಪ್ರಾಯ… ಹೀಗೆ ಆಗಿ ಎಲ್ಲರೂ ಒಬ್ಬಂಟಿ ತನಕ್ಕೆ ಜರಗುವ ಕ್ಷಣ ಒದಗಿ ಬರುವುದು. ಆಮೇಲೆ ಏನು ಎಂಬುದು ಚಿತ್ರದ ಇನ್ನಷ್ಟು ಮುಖ್ಯ ವಿಚಾರ ‘ಮಾಮು ಟೀ ಅಂಗಡಿ’ ಚಿತ್ರದಲ್ಲಿ ಹರಿದು ಬರಲಿದೆ.

ಶ್ರೀರಾಮ್ ಸನ್ನುರ್ಕರ್ ಟೂರಿಂಗ್ ಟಾಕೀಸ್ ಸಂಸ್ಥೆಯ ಈ ಚಿತ್ರದಲ್ಲಿ ನಾಯಕರುಗಲಾಗಿ ವರುಣ್ ಸಿಂಗಮ್, ಅಭಿಶೇಖ್, ರಿತೇಶ್. ಮಹೇಶ್ ಜೊತೆ ನಾಯಕಿಯರಾಗಿ ಸಂಗೀತ ಭಟ್, ರಾಶಿ ಸಿಂಗ್, ಅರ್ಚನ ಸಿಂಗ್ ಇದ್ದಾರೆ. ಪೋಷಕ ಕಲಾವಿದರಾದ ಹೊನ್ನಾವಳ್ಳಿ ಕೃಷ್ಣ, ಬ್ಯಾಂಕ್ ಜನಾರ್ಧನ್, ಬಿರದರ್, ಮೋಹನ್ ಜುನೇಜ, ಲಯೆನ್ದ್ರ, ರಮಾನಂದ್, ರೇಖ ದಾಸ್ ಇದ್ದಾರೆ.


 

ರಾಜೇಶ್ ರಾಮನಾಥ್ ಅವರ ಸಂಗೀತ, ಎಂ ಯು ನಂದಕುಮಾರ ಛಾಯಾಗ್ರಹಣ ಈ ಚಿತ್ರಕ್ಕೆ ಒದಗಿಸಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed